ಬಾಂಡೆಲ್ಲೊ, ಮಾಟ್ಟೆಯೊ
1480-1561. ಇಟಲಿಯ ಕವಿ ಮತ್ತು ಕತೆಗಾರ. ಹದಿನೈದು ಮತ್ತು ಹದಿನಾರನೆಯ ಶತಮಾನದ ಇಟಲಿಯಲ್ಲಿ ಬಹಳ ಜನಪ್ರಿಯವಾದ ನೊವೆಲ್ಸ್ ಎಂಬ ಸಣ್ಣ ಕತೆಗಳನ್ನು ರಚಿಸಿ ಖ್ಯಾತನಾದವ. ಷೇಕ್ಸ್‍ಪಿಯರ್ ಕವಿಯ ರೋಮಿಯೋ-ಜೂಲಿಯಟ್ ನಾಟಕಕ್ಕೆ ಈತನ ಜೂಲಿಯಟಾ ಮತ್ತು ರೋಮಿಯೊ ಎಂಬ ಕಥೆಯೇ ಆಧಾರ ಎನ್ನಲಾಗಿದೆ. ಈತನ ಕಥೆಗಳು ಅಂದಿನ ಸಾಮಾಜಿಕ ಸ್ಥಿತಿಗಳನ್ನು ತಿಳಿಸುತ್ತವೆ. ಪೆಟ್ರಾರ್ಕ್ ಕವಿಯನ್ನು ಅನುಕರಣೆ ಮಾಡಿ ಈತ ಭಾವಗೀತೆಗಳನ್ನು ರಚಿಸಿದ್ದರೂ ಈತನ ಖ್ಯಾತಿ ಕತೆಗಾರನೆಂದೆ.								(ಎಚ್.ಕೆ.ಆರ್.; ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ